Monday, August 18, 2008

ಸ್ವಾತಂತ್ರ್ಯ


ಸ್ವಾತಂತ್ರ್ಯ ಸ್ವಲ್ಪ ಹೊತ್ತು ಹಕ್ಕಿಯಾಗಿರುವ ಬಾರೆ
...............
ಸ್ವತಂತ್ರ್ಯವಾಗಿಚಿಗುರು ತಿಂದು ಚಿಲಿಪಿಲಿಗುಟ್ಟುವ ಬಾರೆ...
ಸ್ವಚ್ಚಂದವಾಗಿ ನೀಲಿ ಗಗನದಲ್ಲಿ ತೇಲುವ ಬಾ ...
ರವಿಯ ಕಿರಣಗಳ ಚುಂಬಿಸುವ ಬಾರೆ...
ತಂಪಾದ ಗಾಳಿಯ ಸವರಿ ಹಾರುವ ಬಾ ...
ಮುಸ್ಸಂಜೆ ಹಿಬ್ಬನಿಗಳ ಆಯ್ದು ಹೂವಿನ ಮಡಿಲಲ್ಲಿಡುವ ಬಾ...
ಆ ಹೂಗಳ ಪರಿಮಳ ಸವಿದು ಸಾರುವ ಬಾ...
ಆಗಸದ ತಾರೆಗಳ ಆರಿಸಿ ಗುಟುಕು ನೀಡುವ ಬಾರೆ...
ಹಾಲು ತುಂಬಿದ ಬಿದಿಗೆ ಚಂದ್ರಮನ ಸವಿಯುವ ಬಾ...
ನಿನ್ನ ಮುದ್ದಾದ ರೆಕ್ಕೆಗಲಿಗ ಬಳಲಿವೆ ...
ಬೆಚ್ಚನೆಯ ಸ್ನೇಹದ ಗೂಡ ಸೇರುವ ಬಾರೆ....
ಗಾಯಿ....ಬಾ ...

Thursday, April 3, 2008

Niraparadi

ಲೋಕದ ಕಣ್ಣಿಗೆ ನಾ ಅಪರಾದಿ,
ಬದುಕುವ ಜೀವಕೆ ಜಗವೇ ಅಪರಾದಿ,
ಎಲ್ಲರಿಗೆ ಎಲ್ಲರು ಅಪರಾದಿ,
ಅವರವರಿಗೆ ಅವರು ನಿರಪರಾದಿ.

ಹಿತೈಷಿ

ನಗುವಿನಲ್ಲಿ ಮನ ಪರಿವರ್ತನೆ,
ಮಾತಿನಲ್ಲಿ ಪರಿಣಾಮಕಾರಿ,
ಹೃದಯದಲ್ಲಿ ಪ್ರೀತಿಯ ಸ್ಥಾನ,
ಒಳ್ಳೆಯದೆಡೆಗೆ ಪಯಣ,
ಪಯಣದೊಡನೆ ಪ್ರೇರಣೆ
ಅಭಿವೃದ್ದಿಯತ್ತ ಮನಸ್ಸು,
ಮನಸ್ಸಿನಲ್ಲಿ ಉತ್ಸಾಹ,
ಉತ್ಸಹದೊಡನೆ ಪ್ರೋತ್ಸಾಹ,
ನಿಡುವವನೇ
-ಹಿತೈಷಿ.