Friday, October 8, 2010

ನನ್ನೀ..... ಹನಿಯ ಕನವರಿಕೆ

ನನ್ನೊಳಗಿನ ಭಾವನೆಗಳು
    ಸಾರಿ ಸಾರಿ ಹೇಳುತ್ತಿವೆ ....
ನೀನೆಂದು ನನ್ನವನು... ನನ್ನವನು.....!
    ಆದರೇಕೋ ಕಾಣೆ ನಿನ್ನೆದುರು
ನಿಂತೊಡನೆ ಹದರಗಳೇ ಅಲುಗಾಡುತ್ತಿಲ್ಲ, 
    ಗಂಟಲಿನಿಂದ ಧ್ವನಿಯೇ ಹೊರಡುತ್ತಿಲ್ಲ...
ಎಲ್ಲಕಡೆಯೂ ನಿಶಬ್ದ... ನಿಶಬ್ದ...
    ಕಣ್ಣು ಬಿಟ್ಟೊಡನೆ ಆತಂಕ ?
ನಡೆದದ್ದು ಕನಸು.... ಕನಸೇ ?
    ಹನಿಯೊಂದು ಪುಟಿಯುತ್ತಲೇ
ಕನವರಿಸುತ್ತಿದೆ...
    ಕನಸಲ್ಲೂ ಕಾಡುವೆಯಲ್ಲ,
ನಕ್ಕು ನಗುವೇಯಲ್ಲ...
    ನನಸಗಲೆಂದೊಮ್ಮೆ ಪ್ರಯತ್ನಿಸಬಾರದೆ?
              ಎಂದು
ಪುಟಿದ ಹನಿ ಜಾರುತ್ತಲೇ ನಗುತ್ತಿತ್ತು.........!
    ನಗು ನಗುತ್ತಲೇ ಮರೆಯಾಯಿತು.











Tuesday, August 3, 2010

My Paper presentation on National Conference, August 12th to 14th

Dear friends
National Conference held on Indian academic Libraries- 2020 date August 12 th to 14th at  Birla Auditorium, SIT, Tumkur, Karnataka. So in this conference am presenting a paper on "Web 2.0 and Lib 2.0: A study". 
For more information search this site  http://www.nacial2020.in/ 

Wednesday, July 28, 2010

My First Paper Presentation

I am very happy to share my first paper presentation on  National Seminar on Management of Digital Information Sources, Services and Systems, dated on July 29th and 30th at Department of Library and Information Center, RNS Institution of Technology, Bangalore. so in this seminar I am presenting paper on Evaluation of Web 2.0 Technologies Applications in Selected Indian Libraries. so please friends attend this National Seminar above dated.

Thursday, May 27, 2010

"LIFE BOOK" For You and I (peoples)

Dear Friends how we live in the world with peoples, face the some situations, and lead the life cycle just tips for these life book read happily and live enthusiastic.

Health:
1. Drink plenty of water 

2. Eat breakfast like a king, lunch like a prince and dinner like a beggar

3. Eat more foods that grow on trees and plants, and eat less food that is manufactured in plants (factory)

4. Live with the 3 E's '' Energy, Enthusiasm, and Empathy

5. Make time for prayer

6. Play more games

7. Read more books than you did in 2009

8. Sit in silence for at least 10 minutes each day

9. Sleep for 7 hours

10. Take a 10-30 minutes walk every day '''' and while you walk, SMILE !!


Personality:

11. Don't compare your life to others'. You have no idea what their journey is all about.

12. Don't have negative thoughts or things you cannot control. Instead invest your energy in the positive present moment.

13. Don't over do ; keep your limits

14. Don't take yourself so seriously ; no one else does

15. Don't waste your precious energy on gossip

16. Dream more while you are awake

17. Envy is a waste of time. You already have all you need.

18. Forget issues of the past. Don't remind your partner with his/her mistakes of the past. That will ruin your present happiness.

19. Life is too short to waste time hating anyone. Don't hate others.

20. Make peace with your past so it won't spoil the present

21. No one is in charge of your happiness except you

22. Realize that life is a school and you are here to learn. Problems are simply part of the curriculum that
appear and fade away like algebra class but the lessons you learn will last a lifetime.

23. Smile and Laugh more

24. You don't have to win every argument. Agree to disagree.


Community:

25.. Call your family often

26. Each day give something good to others

27. Forgive everyone for everything

28. Spend time with people over the age of 70 & under the age of 6

29. Try to make at least three people smile each day

30. What other people think of you is none of your business

31. Your job won't take care of you when you are sick. Your family and friends will. Stay in touch.


Life:

32. Do the right things

33. Get rid of anything that isn't useful, beautiful or joyful

34. GOD heals everything

35. However good or bad a situation is, it will change

36. No matter how you feel, get up, dress up and show up !

37. The best is yet to come

38. When you awake alive in the morning, thank GOD for it

39. Your Inner most is always happy. So, be HAPPY!!!!!!!

Wednesday, May 26, 2010

ನೀ ನಡೆವ ಹಾದಿಯಲ್ಲಿ .....



ನನ್ನ ಜೊತೆ ನೀನಿರುತ್ತಿಯ ಅಲ್ಲವೇ ?

ಪ್ರತಿ ಹೆಜ್ಜೆಯಲ್ಲೂ, ನೋವು ನಲಿವಿನಲ್ಲೂ?
ಸ್ನೇಹ ಪ್ರೀತಿಯಲ್ಲೂ  ಗೆಳೆಯಾ

ನೀನಿರದೆ ನೋವು ನೋವಲ್ಲ, ನಲಿವು ನಲಿವಲ್ಲ !

Tuesday, May 5, 2009

ಸ್ನೇಹಿತನಿಗೊಂದು ನೆನಪಿನ ಓಲೆ







ಪ್ರೀತಿಯ ನೆಲ್ಮೆಯ ಗೆಳೆಯನೇ....................

ಗೆಳೆಯಾ
ಯಾಕೋ ಹೊಡಿತಿಯಾ? ಮತ್ತೆ ನೀ ಹೊದಿತಿಯಾ?, ಲೇ ತಲೆಗೆ ಹೊಡಿಬೇಡ ಕಣೆ ನೋವ್ವಾಗುತ್ತೆ, ಮತ್ತೆ ನೀ ಗಿ೦ಟ್ಟುತಿಯಾ....ನೋಡು ನನ್ ಕೈ ಹೇಗೆ ರಕ್ತ ಹೆಪ್ಪು ಗಟ್ಟಿದೆ ಅಂಥ!
ಸರಿ ಆಯ್ತು......... ಇವಾಗ ಹೊಡಿಬಾರ್ದು ಅಂಥ..........ಸರಿ ರಾಜಿ ಆಯ್ತಾ.............. ಆಯ್ತು.......ನೋಡು ಮತ್ತೆ ನನ್ ಕೂದಲು ಬಿಡೋ, ಕೋತಿ ... ನೋಡು.... ನನ್ ಕೂದ್ಲು ಮುಟ್ಟಿದರೆ ಸಾಯ್ಸಿಬಿಡ್ತ್ಹಿನಿ............. ನೋಡೇ ಬಿಡ್ತ್ಹಿನಿ ಕಣೆ ಮುಟ್ಟುತ್ತಿನಿ ... ಏನಿವಾಗ? ಸಾಯ್ಸ್ತಿಯಾ ? ಮಗ್ನೆ ಬೇಡ ನೋಡು ಕೋಲೆ ಅಗೋಗ್ತಿಯಾ......... ಥೂ! ಹೋಗೋ ಕೋಣ ...............!ಹಲ್ಲು ಕಿರಿಬೆಡ ದೆವ್ವ, ಹೋಗಿ ಸಾಯಿ... ಹೋಗೆ ಹಂದಿ.....ನಮ್ಮ್ ಅಜ್ಜಿನು ನಿನ್ನ ಹಾಗೆ ಕಣೆ .......! ಹೇಗೆ ಅಲ್ವಾ..... ಈ ಸ್ನೇಹದ ಬೆಸುಗೆಯೇ ಹೀಗೆ ಹೀಗೆ ಅಲ್ವ ಕೆಲವರಿಗೆ ಮೌನವಾಗಿ ಹುಟ್ಟಿದರೆ ಇನ್ನೂ ಕೆಲವರಿಗೆ ಜಗಳ ಆಡ್ತಾ.... ಕಿತ್ತಾಡ್ತಾ .... ಹುಟ್ಟಿಕೊಳ್ಳುತ್ತೆ .

ನಮ್ಮ ಸ್ನೇಹ ಹೇಗೆ ಬೆಳೆದು ಹೆಮ್ಮರವಾಗಿದೆ ಅಗಿದೆ ಅನ್ದ್ರೇ ಅದರ ಪ್ರತಿಕ್ಷಣವನ್ನು ನೆನೆಯಲು ಆಗ್ತಿಲ್ಲ, ಹಾಗೆ ಮರೆಯಲು ಆಗುತ್ತಿಲ್ಲ.ಇವಾಗ ಸ್ನೇಹ ಅನ್ನೋ ಸಂಬಂಧ ಚಾಟಿಂಗ್ , ಎಸ್ ಎಂ ಎಸ್ , ಫೋನ್ ಸೆಳೆತದಲ್ಲಿ ಹುಟ್ಟಿ ಬೆಳೆಯುತ್ತೆ ಅಲ್ವಾ ಹಾಗೆ ನೋಡಿದ್ರೇ ಕೆಲವರಲ್ಲಿ ಜಗಳ, ಹರಟೆ, ಕಾದಾಟ ಹೋಡೆದಾಟ ಈ ಮುಲಕ ಹುಟ್ಟಿ ಕಣ್ಣ ನೋಟದಲ್ಲಿ ಸೆಳೆದು ಬೇರೆತಾಗಿದೆ ಅಲ್ವಾ.... ಜಗಳದಲ್ಲಿ ಆಡದ ಆಟ ಯಾವುದಿದೆ? ಯಾವ ಜನ್ಮದ ನ೦ಟ್ಟೋ ಏನೋ, ನಮ್ಮೇಲ್ಲರಲ್ಲಿ ಸ್ನೇಹ-ಪ್ರೀತಿ ಒಂದಾಗಿದೆ.ಇದನ್ನ ಉಳಿಸಿ ಕೊಂಡು... ಭವಿಷ್ಯತ್ತಿನಲ್ಲಿ ಗಟ್ಟಿಯಾಗಿರಲು ಎಷ್ಟು ಎಣಗಾಡಬೇಕೋ ಏನೋ?ಎನಾಗಲಿ ಏಕೀನ್ದ್ರೆಹುಡುಗ ಹುಡುಗಿ ಸ್ನೇಹಿತರಾಗಿ ಇದ್ರೆ ನಮ್ಮ ಸಮಾಜದಲ್ಲಿ ಯಾವರೀತಿ ನೋಡುತ್ತಾರೆ ಮನೆಯಲ್ಲಿ ಏನೆಲ್ಲಾ ಹರ ಸಾಹಸ ಮಾಡಬೇಕು ಅಲ್ವ ಆದರು ನಾವು ನಮ್ಮ ಕೋನೆ ಉಸಿರು ಇರುವವರೆಗು ಒಟ್ಟಾಗಿ ಇರೋಣ ಆಯ್ತಾ....ಎನ್ನುವ ಭರವಸೆಗಳು ಪದೇ ಪದೇ ಮನಸ್ಸಿನಲ್ಲಿ ಬರುತ್ತಲೇ ಇರುತ್ತದೆ. ಈ ಸ್ನೇಹ ಪ್ರೀತಿ ನಮ್ಮ ಭಾವಾನ ಲೋಕದಲ್ಲಿ ಹೊಸ ಸ್ವರ್ಗ ಲೋಕವನ್ನೇ ಸೃಷ್ಟಿಸಿಬಿಟ್ಟಿದೆ. ಬೇಡವೆಂದರೂ ಅದರಲ್ಲಿ ಒಬ್ಬರಿಗೊಬ್ಬರಿನ ಕಾಳಜಿ, ಕುಶಲ-ಕ್ಷೇಮ ಅಕ್ಕರೆ ತಮಗರಿವಿಲ್ಲದಂತೆ ಮುಡಿ ಬಂದುಬಿಡುತ್ತದೆ ಅಲ್ವಾ. ಹಾಗೆ ಕಾಪಾಡಿಕೊಳ್ಳುವ ಧೈರ್ಯ ತಂದುಬಿಡುತದೆ.
ಹೀಗೆ ಸಲಹೆ ಸಹಕಾರಗಳು, ಹೇಳಲಾಗದ ಹತ್ತಾರು ಭಾವಗಳು, ಕಣ್ಣ ಮುಂದೆ ನಕ್ಕು ನಗಿಸಿ ಮಾಯವಾಗುತ್ತದೆ. ಅನುಭವಗಳ ಸರಮಾಲೆಯನ್ನೇ ಕಟ್ಟಿಬಿಡುತ್ತದೆ. ಗೊತ್ತೋ ಗೊತ್ತಿಲ್ಲದೆಯೋ ಕೆಲವೊಮ್ಮೆ ಪ್ರಾರಂಭವಾದ ಮನೆಯವರೊಡನೆ ಕಣ್ಣ ಮುಚ್ಚಾಲೆ ಆಟ... ಸತ್ಯ ಹೇಳಬೇಕೆಂದರು ಹೇಳಲಾಗದೆ ಹೇಳುವ ಸಣ್ಣ ಸಣ್ಣ ಸುಳ್ಳುಗಳು, ಕಳ್ಳ ನೆಪಗಳು ತಡವರಿಕೆ ಇಲ್ಲದೆ ಸರಾಗವಾಗಿ ನಾಲಿಗೆಯಿಂದ ಹೊರ ಬಿಳುತ್ತವೆ.
ಇದೀಗ ನಮ್ಮ ಸ್ನೇಹ-ಪ್ರೀತಿಯ ವಾಸ್ತವದ ಬಗ್ಗೆ ಒಮ್ಮೆ ಯೋಚಿಸಿದರೆ ಏನೋ ಒಂದು ರೀತಿಯ ಭಯದ ಗೂಡಾಗಿ ಮನಸ್ಸು ಪರಿವರ್ತನೆ ಗೊಳ್ಳುತ್ತದೆ. ಭವಿಷ್ಯತ್ತಿನಲ್ಲಿ ನಮ್ಮ ಸ್ನೇಹ ಯಾರನ್ನು ನೋಯಿಸುವುದಿಲ್ಲ ಇವಾಗಲು ಯಾರನ್ನು ನೋಯಿಸಿಲ್ಲ, ಅನ್ಯಾಯವನ್ನು ಮಾಡಿಲ್ಲ ಮಾಡುವುದು ಇಲ್ಲ ಅಂದಮೇಲೆ ಯಾಕೆ ನಮ್ಮ ಸೇಹ-ಪ್ರೀತಿಗೆ ಭಯವೋ ತಿಳಿಯದು. ನಿಸ್ವಾರ್ಥದಿಂದ ಹುಟ್ಟಿ ಬೆಳೆದ ಸ್ನೇಹ ಸೇತುವೆಯನ್ನು ಮರೆಯಲು ಸಾಧ್ಯವಿಲ್ಲ ಹಾಗೆ ಕೆಟ್ಟ ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವ ಅಮೂಲ್ಯ ಬಂಧನವೇ ಈ ಸ್ನೇಹ-ಪ್ರೀತಿ.
ಯಾವುದೇ ಜಾತಿ ಧರ್ಮ ಭೇದ ಭಾವ ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೆ ಕೆಸರಲ್ಲಿ ಹುಟ್ಟಿದ ಕಮಲದಂತೆ, ಹೆಚ್ಚೇನನ್ನು ಬೇಡದ ಯಾವುದೇ ರಕ್ತ ಸಂಬಂಧ ಇಲ್ಲದ, ತಂದೆ- ತಾಯಿ ಜೊತೆಗೂ ಹೇಳಲಾಗದ ಭಾವನೆಗಳನ್ನು, ಅಣ್ಣ ಅಕ್ಕನ ಜೊತೆಯಲ್ಲೂ ಹಂಚಿಕೊಳ್ಳಲಾಗದ ಅಳಲನ್ನೂ, ನಿನ್ನ ಸ್ನೇಹ ಪ್ರೀತಿಯಲ್ಲಿ ಹಂಚಿ ಕೊಂಡಿರುವೆ ಗೆಳೆಯ . ಕೆಲವೊಮ್ಮೆ ಪ್ರೀತಿ ವಾತ್ಸಲ್ಯವನ್ನ ಅನುಭವಿಸಿರುವೆ.

ಅಪ್ಪ ಅಮ್ಮನ ಕರುಳ ಬಳ್ಳಿಯಲ್ಲಿ ಹುಟ್ಟಿ ಅವರು ನಮಗಾಗಿ ಮಾಡುವ ಕಾರ್ಯವೆಲ್ಲವು ಕರ್ತವ್ಯ ಎನಿಸಿಕೊಂಡರೆ, ಸಂಬಂಧವೇ ಇಲ್ಲದೆ ಸಂಬಂಧವನ್ನ ಹುಟ್ಟಿಸುವುದೇ ಈ ಸ್ನೇಹ ಪ್ರೀತಿ. ಕರುಣೆಗಿಂತ ಕಾಳಜಿ ನೀಡುವ ಸ್ನೇಹ ಸಂಬಂಧ, ನಮಗಾಗಿ ಒಂದು ಜೀವ ಕಾಯುತ್ತದೆ, ಕಾಡುತ್ತದೆ, ಕಾಡಿಸುತ್ತದೆ ಅನ್ನೋ ಫೀಲಿಂಗ್ ದೊಡ್ಡದು ಅಲ್ವೇನೋ.... ಮುಂದಿನ ದಿನವ ನೆನೆಯದೆ ಇಂದಿನ ಸ್ನೇಹದ ಗೂಡಲ್ಲಿ ಬೆಚ್ಚಗಿರುವ ನಮ್ಮ ಮನಸ್ಸನ್ನು ಮೃದುವಾಗಿ ನೋಯಿಸದಂತೆ ಭವಿಷ್ಯತ್ತಿನ ನಮ್ಮ ಜೀವನದ ಉಸಿರು ಹಸಿರಾಗಿರುವವರೆಗೂ ಈ ಸ್ನೇಹ ಪ್ರೀತಿಯ ಕಂಪು ಜೀವನದ ಬನದಲ್ಲಿ ಸುಸುತ್ತಿರಲಿ ನಮ್ಮಸ್ನೇಹ ಪ್ರೀತಿಯನ್ನು ಯಾರು ಅರ್ಥಮಾಡಿ ಕೊಳ್ಳುವರೋ ಇಲ್ಲವೋ ತಿಳಿಯದು ಆದರೆ ಜೋತೆಗಿರುವಷ್ಟು ದಿನಗಳ ಕಾಲ ಸಂತೋಷದಿಂದ ಇರೋಣ.ಆಯ್ತಾ... ಕೊನೆಗೊಮ್ಮೆ ನಾ ನುಡಿವೆ ನಿನಗೆ... ಭರವಸೆ ಅಂತು ಖಂಡಿತ ಅಲ್ಲ... ಕಣೋ... ನನ್ನೊಳಗಿನ ಸ್ನೇಹ ಪ್ರೀತಿ ರಕ್ತದೊಳಗಿನ ಕೆಂಪು ಕಣದಂತೆ, ನನ್ನೊಳಗೆ ನಿನ್ನ ಭಾವನೆಗಳ ನೆನಪು ಕಾಡುತ್ತಲೇ ಇರುತ್ತದೆ...ಇದು ಮುಂದಿನ ಕಾಲ ಗರ್ಭದಡಿಯಲ್ಲೂ ಇದರ ನೆನಪು ಅಳಿಯದಂತೆ ಮರೆವು ಸುಳಿಯದಂತೆ ಕಾಯುತೇನೆ ನನೊಳಗಿನ ನನ್ನನ್ನೇ ಕಾಡಿಸುತ್ತೇನೆ. ನಿನ್ನನ್ನೋಮ್ಮೆ ನೆನಪಿಸುತ್ತೆನೆ.
ನೀ ಬಯಸಿದ ಜೀವನ ನಿನ್ನದಾಗಿರಲಿ.....ಜೊತೆಯಲಿ ಸವಿ ಸವಿಯಾದ ನೆನಪಿರಲಿ ಗೆಳಯಾ....
ಇಂತಿ ನಿನ್ನ ಪ್ರೀತಿಯ ಗೆಳತಿ

Tuesday, March 17, 2009

ಮರೆವು


ನಮ್ಮ ಜೀವನದಲ್ಲಿ ನಮ್ಮದೇ ಆದ ಎಷ್ಟೋ ಸಹಸ್ರಾರು ಘಟನೆಗಳು ನಡೆದು ಹೋಗಿವೆ.
ಅವುಗಳಲ್ಲಿ ಬಹುಪಾಲು ನನ್ನ ಮರವೆಯ ಮಹಾಸಾಗರದಲ್ಲಿ ಮುಳುಗಿ ಹೋಗಿವೆ.
ಆದರೆ ಆ ಸತ್ತ ನೆನಪೇ
ಈಗ ಕೆಲವಾರು ಜೀವಂತ ಶಿಶುಗಳನ್ನ ಹೆತ್ತಿವೆ.
ಕೆಲವು ನನ್ನನ್ನು ಹೀಯಾಳಿಸಿ ನಗುತ್ತಿದ್ದರೆ ಮತ್ತೆ ಕೆಲವು
ನನ್ನ ಮರೆವೆಯ ದುರ್ದೆಸೆಗಾಗಿ ಕಣ್ಣೀರ್ ಇಡುತ್ತಿದೆ.