Tuesday, May 5, 2009

ಸ್ನೇಹಿತನಿಗೊಂದು ನೆನಪಿನ ಓಲೆ







ಪ್ರೀತಿಯ ನೆಲ್ಮೆಯ ಗೆಳೆಯನೇ....................

ಗೆಳೆಯಾ
ಯಾಕೋ ಹೊಡಿತಿಯಾ? ಮತ್ತೆ ನೀ ಹೊದಿತಿಯಾ?, ಲೇ ತಲೆಗೆ ಹೊಡಿಬೇಡ ಕಣೆ ನೋವ್ವಾಗುತ್ತೆ, ಮತ್ತೆ ನೀ ಗಿ೦ಟ್ಟುತಿಯಾ....ನೋಡು ನನ್ ಕೈ ಹೇಗೆ ರಕ್ತ ಹೆಪ್ಪು ಗಟ್ಟಿದೆ ಅಂಥ!
ಸರಿ ಆಯ್ತು......... ಇವಾಗ ಹೊಡಿಬಾರ್ದು ಅಂಥ..........ಸರಿ ರಾಜಿ ಆಯ್ತಾ.............. ಆಯ್ತು.......ನೋಡು ಮತ್ತೆ ನನ್ ಕೂದಲು ಬಿಡೋ, ಕೋತಿ ... ನೋಡು.... ನನ್ ಕೂದ್ಲು ಮುಟ್ಟಿದರೆ ಸಾಯ್ಸಿಬಿಡ್ತ್ಹಿನಿ............. ನೋಡೇ ಬಿಡ್ತ್ಹಿನಿ ಕಣೆ ಮುಟ್ಟುತ್ತಿನಿ ... ಏನಿವಾಗ? ಸಾಯ್ಸ್ತಿಯಾ ? ಮಗ್ನೆ ಬೇಡ ನೋಡು ಕೋಲೆ ಅಗೋಗ್ತಿಯಾ......... ಥೂ! ಹೋಗೋ ಕೋಣ ...............!ಹಲ್ಲು ಕಿರಿಬೆಡ ದೆವ್ವ, ಹೋಗಿ ಸಾಯಿ... ಹೋಗೆ ಹಂದಿ.....ನಮ್ಮ್ ಅಜ್ಜಿನು ನಿನ್ನ ಹಾಗೆ ಕಣೆ .......! ಹೇಗೆ ಅಲ್ವಾ..... ಈ ಸ್ನೇಹದ ಬೆಸುಗೆಯೇ ಹೀಗೆ ಹೀಗೆ ಅಲ್ವ ಕೆಲವರಿಗೆ ಮೌನವಾಗಿ ಹುಟ್ಟಿದರೆ ಇನ್ನೂ ಕೆಲವರಿಗೆ ಜಗಳ ಆಡ್ತಾ.... ಕಿತ್ತಾಡ್ತಾ .... ಹುಟ್ಟಿಕೊಳ್ಳುತ್ತೆ .

ನಮ್ಮ ಸ್ನೇಹ ಹೇಗೆ ಬೆಳೆದು ಹೆಮ್ಮರವಾಗಿದೆ ಅಗಿದೆ ಅನ್ದ್ರೇ ಅದರ ಪ್ರತಿಕ್ಷಣವನ್ನು ನೆನೆಯಲು ಆಗ್ತಿಲ್ಲ, ಹಾಗೆ ಮರೆಯಲು ಆಗುತ್ತಿಲ್ಲ.ಇವಾಗ ಸ್ನೇಹ ಅನ್ನೋ ಸಂಬಂಧ ಚಾಟಿಂಗ್ , ಎಸ್ ಎಂ ಎಸ್ , ಫೋನ್ ಸೆಳೆತದಲ್ಲಿ ಹುಟ್ಟಿ ಬೆಳೆಯುತ್ತೆ ಅಲ್ವಾ ಹಾಗೆ ನೋಡಿದ್ರೇ ಕೆಲವರಲ್ಲಿ ಜಗಳ, ಹರಟೆ, ಕಾದಾಟ ಹೋಡೆದಾಟ ಈ ಮುಲಕ ಹುಟ್ಟಿ ಕಣ್ಣ ನೋಟದಲ್ಲಿ ಸೆಳೆದು ಬೇರೆತಾಗಿದೆ ಅಲ್ವಾ.... ಜಗಳದಲ್ಲಿ ಆಡದ ಆಟ ಯಾವುದಿದೆ? ಯಾವ ಜನ್ಮದ ನ೦ಟ್ಟೋ ಏನೋ, ನಮ್ಮೇಲ್ಲರಲ್ಲಿ ಸ್ನೇಹ-ಪ್ರೀತಿ ಒಂದಾಗಿದೆ.ಇದನ್ನ ಉಳಿಸಿ ಕೊಂಡು... ಭವಿಷ್ಯತ್ತಿನಲ್ಲಿ ಗಟ್ಟಿಯಾಗಿರಲು ಎಷ್ಟು ಎಣಗಾಡಬೇಕೋ ಏನೋ?ಎನಾಗಲಿ ಏಕೀನ್ದ್ರೆಹುಡುಗ ಹುಡುಗಿ ಸ್ನೇಹಿತರಾಗಿ ಇದ್ರೆ ನಮ್ಮ ಸಮಾಜದಲ್ಲಿ ಯಾವರೀತಿ ನೋಡುತ್ತಾರೆ ಮನೆಯಲ್ಲಿ ಏನೆಲ್ಲಾ ಹರ ಸಾಹಸ ಮಾಡಬೇಕು ಅಲ್ವ ಆದರು ನಾವು ನಮ್ಮ ಕೋನೆ ಉಸಿರು ಇರುವವರೆಗು ಒಟ್ಟಾಗಿ ಇರೋಣ ಆಯ್ತಾ....ಎನ್ನುವ ಭರವಸೆಗಳು ಪದೇ ಪದೇ ಮನಸ್ಸಿನಲ್ಲಿ ಬರುತ್ತಲೇ ಇರುತ್ತದೆ. ಈ ಸ್ನೇಹ ಪ್ರೀತಿ ನಮ್ಮ ಭಾವಾನ ಲೋಕದಲ್ಲಿ ಹೊಸ ಸ್ವರ್ಗ ಲೋಕವನ್ನೇ ಸೃಷ್ಟಿಸಿಬಿಟ್ಟಿದೆ. ಬೇಡವೆಂದರೂ ಅದರಲ್ಲಿ ಒಬ್ಬರಿಗೊಬ್ಬರಿನ ಕಾಳಜಿ, ಕುಶಲ-ಕ್ಷೇಮ ಅಕ್ಕರೆ ತಮಗರಿವಿಲ್ಲದಂತೆ ಮುಡಿ ಬಂದುಬಿಡುತ್ತದೆ ಅಲ್ವಾ. ಹಾಗೆ ಕಾಪಾಡಿಕೊಳ್ಳುವ ಧೈರ್ಯ ತಂದುಬಿಡುತದೆ.
ಹೀಗೆ ಸಲಹೆ ಸಹಕಾರಗಳು, ಹೇಳಲಾಗದ ಹತ್ತಾರು ಭಾವಗಳು, ಕಣ್ಣ ಮುಂದೆ ನಕ್ಕು ನಗಿಸಿ ಮಾಯವಾಗುತ್ತದೆ. ಅನುಭವಗಳ ಸರಮಾಲೆಯನ್ನೇ ಕಟ್ಟಿಬಿಡುತ್ತದೆ. ಗೊತ್ತೋ ಗೊತ್ತಿಲ್ಲದೆಯೋ ಕೆಲವೊಮ್ಮೆ ಪ್ರಾರಂಭವಾದ ಮನೆಯವರೊಡನೆ ಕಣ್ಣ ಮುಚ್ಚಾಲೆ ಆಟ... ಸತ್ಯ ಹೇಳಬೇಕೆಂದರು ಹೇಳಲಾಗದೆ ಹೇಳುವ ಸಣ್ಣ ಸಣ್ಣ ಸುಳ್ಳುಗಳು, ಕಳ್ಳ ನೆಪಗಳು ತಡವರಿಕೆ ಇಲ್ಲದೆ ಸರಾಗವಾಗಿ ನಾಲಿಗೆಯಿಂದ ಹೊರ ಬಿಳುತ್ತವೆ.
ಇದೀಗ ನಮ್ಮ ಸ್ನೇಹ-ಪ್ರೀತಿಯ ವಾಸ್ತವದ ಬಗ್ಗೆ ಒಮ್ಮೆ ಯೋಚಿಸಿದರೆ ಏನೋ ಒಂದು ರೀತಿಯ ಭಯದ ಗೂಡಾಗಿ ಮನಸ್ಸು ಪರಿವರ್ತನೆ ಗೊಳ್ಳುತ್ತದೆ. ಭವಿಷ್ಯತ್ತಿನಲ್ಲಿ ನಮ್ಮ ಸ್ನೇಹ ಯಾರನ್ನು ನೋಯಿಸುವುದಿಲ್ಲ ಇವಾಗಲು ಯಾರನ್ನು ನೋಯಿಸಿಲ್ಲ, ಅನ್ಯಾಯವನ್ನು ಮಾಡಿಲ್ಲ ಮಾಡುವುದು ಇಲ್ಲ ಅಂದಮೇಲೆ ಯಾಕೆ ನಮ್ಮ ಸೇಹ-ಪ್ರೀತಿಗೆ ಭಯವೋ ತಿಳಿಯದು. ನಿಸ್ವಾರ್ಥದಿಂದ ಹುಟ್ಟಿ ಬೆಳೆದ ಸ್ನೇಹ ಸೇತುವೆಯನ್ನು ಮರೆಯಲು ಸಾಧ್ಯವಿಲ್ಲ ಹಾಗೆ ಕೆಟ್ಟ ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವ ಅಮೂಲ್ಯ ಬಂಧನವೇ ಈ ಸ್ನೇಹ-ಪ್ರೀತಿ.
ಯಾವುದೇ ಜಾತಿ ಧರ್ಮ ಭೇದ ಭಾವ ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೆ ಕೆಸರಲ್ಲಿ ಹುಟ್ಟಿದ ಕಮಲದಂತೆ, ಹೆಚ್ಚೇನನ್ನು ಬೇಡದ ಯಾವುದೇ ರಕ್ತ ಸಂಬಂಧ ಇಲ್ಲದ, ತಂದೆ- ತಾಯಿ ಜೊತೆಗೂ ಹೇಳಲಾಗದ ಭಾವನೆಗಳನ್ನು, ಅಣ್ಣ ಅಕ್ಕನ ಜೊತೆಯಲ್ಲೂ ಹಂಚಿಕೊಳ್ಳಲಾಗದ ಅಳಲನ್ನೂ, ನಿನ್ನ ಸ್ನೇಹ ಪ್ರೀತಿಯಲ್ಲಿ ಹಂಚಿ ಕೊಂಡಿರುವೆ ಗೆಳೆಯ . ಕೆಲವೊಮ್ಮೆ ಪ್ರೀತಿ ವಾತ್ಸಲ್ಯವನ್ನ ಅನುಭವಿಸಿರುವೆ.

ಅಪ್ಪ ಅಮ್ಮನ ಕರುಳ ಬಳ್ಳಿಯಲ್ಲಿ ಹುಟ್ಟಿ ಅವರು ನಮಗಾಗಿ ಮಾಡುವ ಕಾರ್ಯವೆಲ್ಲವು ಕರ್ತವ್ಯ ಎನಿಸಿಕೊಂಡರೆ, ಸಂಬಂಧವೇ ಇಲ್ಲದೆ ಸಂಬಂಧವನ್ನ ಹುಟ್ಟಿಸುವುದೇ ಈ ಸ್ನೇಹ ಪ್ರೀತಿ. ಕರುಣೆಗಿಂತ ಕಾಳಜಿ ನೀಡುವ ಸ್ನೇಹ ಸಂಬಂಧ, ನಮಗಾಗಿ ಒಂದು ಜೀವ ಕಾಯುತ್ತದೆ, ಕಾಡುತ್ತದೆ, ಕಾಡಿಸುತ್ತದೆ ಅನ್ನೋ ಫೀಲಿಂಗ್ ದೊಡ್ಡದು ಅಲ್ವೇನೋ.... ಮುಂದಿನ ದಿನವ ನೆನೆಯದೆ ಇಂದಿನ ಸ್ನೇಹದ ಗೂಡಲ್ಲಿ ಬೆಚ್ಚಗಿರುವ ನಮ್ಮ ಮನಸ್ಸನ್ನು ಮೃದುವಾಗಿ ನೋಯಿಸದಂತೆ ಭವಿಷ್ಯತ್ತಿನ ನಮ್ಮ ಜೀವನದ ಉಸಿರು ಹಸಿರಾಗಿರುವವರೆಗೂ ಈ ಸ್ನೇಹ ಪ್ರೀತಿಯ ಕಂಪು ಜೀವನದ ಬನದಲ್ಲಿ ಸುಸುತ್ತಿರಲಿ ನಮ್ಮಸ್ನೇಹ ಪ್ರೀತಿಯನ್ನು ಯಾರು ಅರ್ಥಮಾಡಿ ಕೊಳ್ಳುವರೋ ಇಲ್ಲವೋ ತಿಳಿಯದು ಆದರೆ ಜೋತೆಗಿರುವಷ್ಟು ದಿನಗಳ ಕಾಲ ಸಂತೋಷದಿಂದ ಇರೋಣ.ಆಯ್ತಾ... ಕೊನೆಗೊಮ್ಮೆ ನಾ ನುಡಿವೆ ನಿನಗೆ... ಭರವಸೆ ಅಂತು ಖಂಡಿತ ಅಲ್ಲ... ಕಣೋ... ನನ್ನೊಳಗಿನ ಸ್ನೇಹ ಪ್ರೀತಿ ರಕ್ತದೊಳಗಿನ ಕೆಂಪು ಕಣದಂತೆ, ನನ್ನೊಳಗೆ ನಿನ್ನ ಭಾವನೆಗಳ ನೆನಪು ಕಾಡುತ್ತಲೇ ಇರುತ್ತದೆ...ಇದು ಮುಂದಿನ ಕಾಲ ಗರ್ಭದಡಿಯಲ್ಲೂ ಇದರ ನೆನಪು ಅಳಿಯದಂತೆ ಮರೆವು ಸುಳಿಯದಂತೆ ಕಾಯುತೇನೆ ನನೊಳಗಿನ ನನ್ನನ್ನೇ ಕಾಡಿಸುತ್ತೇನೆ. ನಿನ್ನನ್ನೋಮ್ಮೆ ನೆನಪಿಸುತ್ತೆನೆ.
ನೀ ಬಯಸಿದ ಜೀವನ ನಿನ್ನದಾಗಿರಲಿ.....ಜೊತೆಯಲಿ ಸವಿ ಸವಿಯಾದ ನೆನಪಿರಲಿ ಗೆಳಯಾ....
ಇಂತಿ ನಿನ್ನ ಪ್ರೀತಿಯ ಗೆಳತಿ

No comments: