Thursday, March 8, 2018

ಹಂಬಲ

ಪ್ರೀತಿ ಹುಸಿಯಾಗದಿರಲಿ, ಗೆಳೆಯ 
ಸ್ನೇಹ ಜಾರದಿರಲಿ, ಗೆಳೆಯ 
ಬೆಸುಗೆ ಬಿರುಕಾಗದಿರಲಿ, ಗೆಳೆಯ 
ಬದುಕು ಕನಸಾಗದಿರಲಿ, ಗೆಳೆಯ 
ಗೆಳೆಯ ಬದಲಾಗು.... ಬದಲಾಗು... 
 ನಾ ಬದಲಾಗುವ ಮುನ್ನವೇ 
ನೀ ಬದಲಾಗು ...... ನೀ ಬದಲಾಗು .......

ಹಳೆಯ ನೆನಪು

ಮರೆತು ಮರೆಯಾದರು
     ಮರೆಯದೆ ಮನೆಮಾಡುವೆ ...
ನನ್ನ ಮನದಲ್ಲಿ ಎನ್ನ ಮನದಲ್ಲಿ

ಕಾಣಬೇಡವೆಂದು ಕಾಣೆಯಾದರು
ಕಣ್ಣಂಚಿನಿಂದ ಕದಡಿದರು .....
ಕಣ್ಣೀರಾಗಿ ಕಾಡುವೆ ನನ್ನ ಕಾಡುವೆ

ಅಳಿಸಬೇಕೆಂದು ಅಳಿಸಿದರು
     ಅಳಿಸಲಾಗದು ನನೀಮನದಿಂದ
ಅಳಿಸಬಹುದೊಂದೇ ಗೆಳೆಯ ನಿನ್ನಿಂದ .......
     ನಿನ್ನ ಮುದದಿಂದ...  ನಿನ್ನ ಆದರದಿಂದ
ನಿನ್ನೀ ಮೃದುವಾದ ಪ್ರೀತಿಯಿಂದ......

Friday, September 15, 2017

ಸ್ನೇಹ ಅನುದಿನವು ಸ್ನೇಹವೇ ......

ಸ್ನೇಹ ಅನುದಿನವು ಸ್ನೇಹವೇ ......
ಮರೆಯಲಾಗದ ಅನುಭಾವಗಳು...........
ನನ್ನೊಳಗೆ ಮೋಡ ಕಟ್ಟಿದ ಆ ಭಾವನೆಗಳು.......
ಬೇಡವೆಂದರೂ ಬಿಡದೆ ಕಾಡುವ ನಿಮ್ಮ ನೆನಪುಗಳು .......
ದೂರ ಸರಿದಂತೆ ಒದ್ದೆ ಆಗುವ ಈ ಕಣ್ಣುಗಳು ....
ನಡುವೆಯೂ ಸ್ಪಷ್ಟವಾಗಿ ಕಾಣುವ ನಗು ಮುಖವು ...
ಸ್ನೇಹಕ್ಕೊಂದು ಸಲಾಂ
ಈ ನೋವು ನನ್ನೊಳಗೆ ಶಾಶ್ವತವಾಗಿವಿರಿಸಿರೀ .....
ಕಾರಣ ನಾನು ಬದುಕುವುದನ್ನು ಕಲಿಸಿವೆ ಅವುಗಳು
ಅನುಭಾವಗಳು.......

ತವಕ

💗💗💗💗💗💗💗💗💗💗💗
ತಪ್ಪು ... ತಪ್ಪೆಂದು... ತಡೆದರೂ
      ತಡವರಿಸದೆ ತಪ್ಪೆಸಗುವೆ .....II2II
ತವಕವಿಲ್ಲದೇ ... ನನ್ನ ತವಕವಿಲ್ಲದೇ ....
      
ಕಳೆದುಹೋದದ್ದು ಕಳೆದುಹೋಗಲಿ
      ಕಡೆಗಣಿಸಬೇಡ ಹಾಗೆಂದು ಇಂದು .....II2II
ಕಳೆದೋಗುವುದು ಮುಂದೆಂದೂ .... 

ಬದಲಾಗು ಗೆಳೆಯ ಬದಲಾಗು 
     ಬೆಂಬಲಿಸುವೆ ಬೆಂಬಿಡದೆ ಬೆಂಬಲಿಸುವೆ...II2II
ಬದಲಾಗುವತನಕ ನೀ ಬದಲಾಗುವತನಕ 

           ಇಲ್ಲವೇ ..... ಇಲ್ಲವೇ ....... 
ಜಾರಿಹೋದೀತು ......ನಿನ್ನೊಂದಿಗಿನ ಭಾವನೆಗಳು 
ನನ್ನಿನ್ನೊಂದಿಗಿನ ಬೆಸುಗೆ .... ನನ್ನಿನ್ನ ಪ್ರೀತಿ ...... 
ಎಚ್ಚರ ಗೆಳೆಯ ಎಚ್ಚರ ನಿನಗಿದೋ ಎಚ್ಚರ ......
 💗💗💗💗💗💗💗💗💗💗💗💗💗💗💗

Monday, April 9, 2012

ಕನಸನ್ನು ನನಸಗಿಸೋಣ


ನಮ್ಮೊಳಗಿನ ಭಾವನೆಗಳಿಗೆ, ರೆಕ್ಕೆಕಟ್ಟಿ ಹಾರಲು ಬಿಡದಿದ್ದರೆ .....
ಕನಸುಗಳು ನನಸಗುತ್ತಿರಲಿಲ್ಲ
ಬದುಕನ್ನು ಪ್ರೀತಿಸುತ್ತಿರಲಿಲ್ಲ 
ಭವಿಷ್ಯತ್ತಿನ ರೂಪಗಳಿಗೆ ರೆಕ್ಕೆ
ಕಟ್ಟಲು ಆಗುತ್ತಿರಲಿಲ್ಲ 
ಅದಕ್ಕಾಗಿಯೇ ಜೀವನದ ಪ್ರತಿ
ಭಾವನೆಗಳಿಗೂ ಒಂದು ಒಳ್ಳೆ ಅರ್ಥ ಕೊಡಿ ..... 
ಕನಸನ್ನು ನನಸಾಗಿಸಿ......

Monday, October 17, 2011

International Conference at KIIT University, Bhubaneswar, Orissa

I presented paper on “EdNA Metadata Standard”. International Conference on Digital Library and Electronic Information Management and Control (ICDLEIMC-2011) at KIIT University, Bhubaneswar, Orissa from 8th to 10th October.